ಸಹಕಾರ ಭಾರತಿಯು ಒಂದು ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿದ್ದು, ದೇಶದಾದ್ಯಂತ ಸಹಕಾರ ಚಳುವಳಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
೧೯೭೮ರಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಸಹಕಾರದ ಮೂಲಕ ಸಮಾಜದ ಸರ್ವಾಂಗೀಣ ವಿಕಾಸವನ್ನು ಸಾಧಿಸಲು ಬದ್ಧವಾಗಿದೆ. ಸಹಕಾರಿ ಚಳುವಳಿಯನ್ನು ಜನಪ್ರಿಯಗೊಳಿಸುವುದು, ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವುದು ಮತ್ತು ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಧ್ಯೇಯವಾಗಿದೆ.
ನಾವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿವಿಧ ಯೋಜನೆಗಳನ್ನು ಕೈಗೊಂಡಿದ್ದೇವೆ. ಕೃಷಿ, ವಿವಿಧೋದ್ಯಮ, ಗೃಹನಿರ್ಮಾಣ, ವಿಮಾ, ಕೈಮಗ್ಗ ಮತ್ತು ಹಿತರಕ್ಷಣಾ ಸಹಕಾರಿ ಸಂಘಟನೆಗಳನ್ನು ಪ್ರೋತ್ಸಾಹಿಸುತ್ತೇವೆ.
1975ರ ಜೂನ್ ತಿಂಗಳಿನಲ್ಲಿ ಅಂದಿನ ಕೇಂದ್ರ ಸರಕಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿತು. ಮಧ್ಯರಾತ್ರಿಯಿಂದಲೇ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಮೊಟಕುಗೊಳಿಸಲಾಯಿತು.
ಸುಮಾರು 28 ಸುದೀರ್ಘ ವರ್ಷಗಳ ವಿಶ್ವಮಾದರಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆಯಾಯಿತು. ವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಬಂಧಿಸಲಾಯಿತು. ವಿರೋಧಿಸಿದ ಅನೇಕ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳನ್ನು ದೇಶವ್ಯಾಪಿ ನಿಷೇಧಿಸಲಾಯಿತು.
ಈ ಹಿನ್ನೆಲೆಯಲ್ಲಿ 'ಬಿನಾ ಸಂಸ್ಕಾರ್ ನಹೀ ಸಹಕಾರ್, ಬಿನಾ ಸಹಕಾರ್ ನಹೀ ಉದ್ದಾರ್' ಎನ್ನುವ ಮೂಲಮಂತ್ರವನ್ನು ಘೋಷ ವಾಕ್ಯವನ್ನಾಗಿಟ್ಟುಕೊಂಡು ...
ಅಂದಿನಿಂದ ಸಹಕಾರ ಸಂಘಗಳು, ಸಂಘಗಳ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಸಹಕಾರಿ ಸದಸ್ಯರನ್ನು ಸಂಘಟಿಸಿಕೊಂಡು ಅವರಲ್ಲಿ ರಾಷ್ಟ್ರೀಯ ಚಿಂತನೆಯೊಂದಿಗೆ ಸಾಮಾಜಿಕ ಜವಾಬ್ದಾರಿಯ ತಿಳುವಳಿಕೆಯನ್ನು ಮೂಡಿಸುವ ಕೆಲಸವನ್ನು ಸಹಕಾರ ಭಾರತಿಯು ಮಾಡುತ್ತಿದೆ.
ಸಾಮಾನ್ಯ ಜನರಿಂದ ನಿಯಂತ್ರಿಸಲ್ಪಡುವ ಸಹಕಾರ ಸಂಘಗಳ ಮೂಲಕ ಆರ್ಥಿಕ ಚಟುವಟಿಕೆ ಆರಂಭಿಸುವುದು, ಬಲಿಷ್ಠ ಆರ್ಥಿಕ ಕ್ಷಮತೆಯುಳ್ಳ ಸಹಕಾರ ಸಂಘಗಳ ನಿರ್ಮಾಣ, ಮತ್ತು ರಾಷ್ಟ್ರ ಪುನರುತ್ಥಾನದ ದಾರಿಯಲ್ಲಿ ಚಲಿಸುವುದು ಸಹಕಾರ ಭಾರತಿಯ ದೃಷ್ಟಿಕೋನ.
ಸಹಕಾರ ಅಭಿವೃದ್ಧಿಯ ಮೂಲಕ ದೇಶದ ಆರ್ಥಿಕ ಉತ್ಥಾನ, ದುರ್ಬಲ ನಾಗರಿಕರಿಗೆ ಸಾಂತ್ವನ ಮತ್ತು ಸುಯೋಗ್ಯ ಸಂಸ್ಕಾರಯುತ ಕಾರ್ಯಕರ್ತರ ಸಂಘಟನೆ — ಇವೇ ಸಹಕಾರ ಭಾರತಿಯ ಸ್ಪಷ್ಟ ಗುರಿಗಳು.
ಶ್ರೀ ಲಕ್ಷ್ಮಣ ರಾವ್ ಇನಾಂದಾರ್ (ವಕೀಲ ಸಾಬ್) ಅವರು 1917ರ ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದರು. ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯವರಾಗಿದ್ದ ಅವರು ನ್ಯಾಯವಾದಿಯಾಗಿ ವೃತ್ತಿ ಜೀವನ ನಡೆಸುತ್ತಿದ್ದರು. ಸಹಕಾರ ಚಳುವಳಿಯು ಜನಜೀವನ ಸುಧಾರಣೆಯ ಜೊತೆಗೆ ದೇಶದ ಸಮಗ್ರ ಅಭಿವೃದ್ಧಿಗೆ ಮಾರ್ಗದರ್ಶಿಯಾಗುತ್ತದೆ ಎಂಬುದು ಅವರ ನಂಬಿಕೆ.
1978ರಲ್ಲಿ ಸಹಕಾರ ಭಾರತಿಯ ಸ್ಥಾಪನೆಯಾಗುವ ಸಂದರ್ಭದಲ್ಲಿ ಅವರು ಅದರ ಪ್ರೇರಕ ಶಕ್ತಿಯಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದರು. ತಮ್ಮ ಸಂಘಟನೆ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಅನೇಕ ಸಹಕಾರಿ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಗುಜರಾತ್‌ನಲ್ಲಿ ಕಾರ್ಯ ನಿರ್ವಹಿಸಿದ್ದು, ಬಾಲಸ್ವಯಂಸೇವಕರಾಗಿದ್ದ ಇಂದಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೂ ಪ್ರೇರಣೆಯಾಗಿದ್ದರು.
ತಮ್ಮ ನಿಧನಕ್ಕೂ ಮುನ್ನದ ಐದು ವರ್ಷಗಳಲ್ಲಿ ಸಹಕಾರ ಭಾರತಿಯ ವಿಸ್ತರಣೆಗೆ ದೇಶದಾದ್ಯಂತ ನಿರಂತರ ಪ್ರವಾಸ ಮಾಡಿ ಸಂಘಟನೆಯ ದೃಢ ನೆಲೆ ಬಲಪಡಿಸಿದರು. ಇದರ ಫಲವಾಗಿ ಇಂದಿನ ದಿನದಲ್ಲಿ ಸಹಕಾರ ಭಾರತೀ ದೇಶದಾದ್ಯಂತ 30,000ಕ್ಕೂ ಅಧಿಕ ಸಹಕಾರ ಸಂಘಗಳ ಸಂಪರ್ಕ ಹೊಂದಿದ ಶಕ್ತಿಶಾಲಿ ಸಂಘಟನೆಯಾಗಿ ಬೆಳೆದಿದೆ.
ಶ್ರೀ ಲಕ್ಷ್ಮಣ ರಾವ್ ಇನಾಂದಾರ್ ಅವರ ಜನ್ಮ ಶತಮಾನೋತ್ಸವವನ್ನು 2017ರಲ್ಲಿ ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರ ಸ್ಮರಣಾರ್ಥವಾಗಿ ‘ಸಹಕಾರ ಭಾರತೀ ಪರಿಚಯ ವೈಚಾರಿಕ ತಳಹದಿ’ ಕಿರು ಹೊತ್ತಿಗೆಯನ್ನು ಪ್ರಕಟಿಸಲಾಯಿತು.
ಸಹಕಾರಿ ಸಂಘಟನೆಗಳನ್ನು ಸಂಘಟಿಸುವುದು, ತರಬೇತಿ ಹಾಗೂ ಸದಸ್ಯರ ಸಾಮರ್ಥ್ಯವರ್ಧನೆ.
ಕೃಷಿ, ಗೃಹನಿರ್ಮಾಣ, ಉದ್ಯಮ, ಕೈಮಗ್ಗ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ.
ಸಹಕಾರಿ ಹಕ್ಕುಗಳಿಗಾಗಿ ಚಳುವಳಿ, ಹೋರಾಟ ಮತ್ತು ಸದಸ್ಯರ ಹಿತಾಸಕ್ತಿಗಳ ರಕ್ಷಣೆ.
ಸರ್ಕಾರ ಮತ್ತು ಸಂಸ್ಥೆಗಳ ಮುಂದೆ ಸಹಕಾರಿ ಕ್ಷೇತ್ರದ ಪ್ರತಿನಿಧಿಯಾಗಿ ನಿಲ್ಲುವುದು.
ಸಹಕಾರ ಭಾರತಿಯು ಅನುಸರಿಸುತ್ತಿರುವ ಮೂಲಭೂತ ತತ್ವಗಳು